Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/7

From Wikisource
This page has been validated.

ಪ್ರಕಾಶಕರ ಮಾತು

ಉತ್ತಮ ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮ ಪ್ರಕಾಶನವು ಇದೀಗ ಬಾಸೆಲ್ ಮಿಶನ್ ಕಾರ್ಯಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಶ್ರೀಯುತ ಬೆನೆಟ್ ಜಿ. ಅಮ್ಮನ್ನ ಅವರ ಲೇಖನಗಳ ಈ ಸಂಕಲನವನ್ನು ಹೊರತರುತ್ತಿದೆ.

ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡವರು ಬೆನೆಟ್ ಅಮ್ಮನ್ನ ಅವರು. ಪ್ರಸ್ತುತ 'ಕುರಲ್ ಇಷ್ಟೆರ್ ಕುಡ್ಲ, 'ತುಳು ಪರಿಷತ್', 'ತುಳು ಬೈಬಲ್ ತರ್ಜುಮೆ ಸಮಿತಿ'ಯ ಸದಸ್ಯರಾಗಿ, 'ತುಳು ವಿಕಿಪಿಡಿಯಾ' ಸಂಪಾದಕರಾಗಿ, 'ಬಲ್ಮಕೊ'ದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2015-2017 ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಅಕಾಡೆಮಿಯ ಗ್ರಂಥಾಲಯ ಮತ್ತು ಪತ್ರಾಗಾರವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. 'ಮದಿಪು' ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 'ಚಿಗುರಿದ ಬದುಕು' (ಕಿರು ಕಾದಂಬರಿ) (1996), 'ಬಿಲ್ಲವರು ಮತ್ತು ಬಾಸೆಲ್ ಮಿಶನ್ (2005), 'ಗಾನ ಗೊಂಚಲು'(ಸಂ.2006), 'ಜಾನ್ ಜೇಮ್ಸ್ ಬ್ರಿಗೆಲ್'(2012, ಕನ್ನಡ ವಿ.ವಿ., ಹಂಪಿ) ಕೃತಿಗಳನ್ನು ಬರೆದು ಪ್ರಕಟಿಸಿರುವುದಲ್ಲದೆ, 'ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು (2015)ಮತ್ತು 'ತುಳು ವಿಕ್ರಮಾರ್ಕ ಕತೆ' (2014) ಕೃತಿಗಳನ್ನು ಡಾ. ದುರ್ಗಾಪ್ರವೀಣ್‌ರರೊಂದಿಗೆ ಸಂಪಾದಿಸಿರುತ್ತಾರೆ. ಬಾಸೆಲ್ ಮಿಶನ್-200 ಮತ್ತು 2009ರಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪುಸ್ತಕ ಪ್ರಕಟಣೆಗಳ ಸಂಪಾದಕ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇದೀಗ ನಮ್ಮ ಪ್ರಕಾಶನದಿಂದ ಹೊರಬರುತ್ತಿರುವ ಈ 'ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತು ಇತರ ಲೇಖನಗಳು' ಎಂಬ ಈ ಕೃತಿಯು ತುಳುನಾಡು, ನುಡಿ ಸಂಸ್ಕೃತಿಗೆ ಬಹುಮುಖ್ಯ ಕೊಡುಗೆ ಎಂಬುದರಲ್ಲಿ ಸಂಶಯವಿಲ್ಲ. ಇಲ್ಲಿನ ಲೇಖನಗಳು ಸಂಶೋಧನಾಸಕ್ತರಿಗೆ ಅಗತ್ಯವಾಗಿ ಬೇಕಾಗುವಂತವು. ಬಾಸೆಲ್ ಮಿಶನ್‌ನವರು ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳ ಮೂಲಕ ಸಂಪರ್ಕಸೇತು

ix