Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/6

From Wikisource
This page has been validated.

ಬಿಂಬಿಸುತ್ತಿದೆ. ತುಳುನಾಡಿನ ಅಧ್ಯಯನಕ್ಕೆ ಅವಶ್ಯವಾಗಿ ಬೇಕಾಗಿರುವ ಚಿಂತನೆಗಳು ಅಲ್ಲಿಲ್ಲಿ ಚದುರಿಹೋಗದೆ ಈ ಲೇಖನಗಳ ಮೂಲಕ ದಾಖಲಾಗಿ ಮುಂದಿನ ಆಸಕ್ತರಿಗೆ ಉಳಿದುಕೊಳ್ಳುತ್ತಿರುವುದು ಸಂತಸದ ಸಂಗತಿ. ಇಲ್ಲಿ ಕನ್ನಡ ಮತ್ತು ತುಳು ಲೇಖನಗಳೆರಡೂ ಜೊತೆಜೊತೆಯಾಗಿ ಬಂದಿವೆ. ಇವು ಬಹುಮುಖ್ಯವಾಗಿ ತುಳುನಾಡಿನ ಓದುಗರನ್ನು ಗಮನದಲ್ಲಿರಿಸಿಕೊಂಡು ಬಂದಿವೆ. ಬಹಳ ಮುಖ್ಯವಾಗಿ ತುಳುನಾಡಿಗೆ ಸಂಬಂಧ ಪಟ್ಟ ವಿಚಾರಗಳು ತುಳುವಿನಲ್ಲಿಯೂ ದಾಖಲಾಗತೊಡಗಿರುವುದು ಮಂಗಳೂರು ವಿಶ್ವವಿದ್ಯಾಲಯವು ತುಳು ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿರುವ ಈ ಸಂದರ್ಭದಲ್ಲಿ ಒಳ್ಳೆಯ ಬೆಳವಣಿಗೆ. ಶ್ರೀಯುತರಿಂದ ಇಂತಹ ಬರವಣಿಗೆಗಳು ಇನ್ನೂ ಮುಂದುವರಿಯಲಿ. ಓದುಗರು ಈ ಸಂಕಲನವನ್ನು ಆತ್ಮೀಯತೆಯಿಂದ ಸ್ವಾಗತಿಸಲಿ, ಈ ಮೂಲಕ ಸಂಶೋಧಕರು ಬಾಸೆಲ್ ಮಿಶನ್ ಸಂಬಂಧೀ ವಿವಿಧ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವಂತಾಗಲಿ ಎಂದು ಹಾರೈಸುತ್ತಾ ಅಮ್ಮನ್ನರವರಿಗೆ ತಮ್ಮ ವಿದ್ವತ್ ಲೇಖನಗಳ ಸಂಗ್ರಹಗಳ ಕೃತಿಯನ್ನು ಹೊರತರುವುದಕ್ಕಾಗಿ ಸಂಶೋಧಕರೆಲ್ಲರ ಪರವಾಗಿ ಶುಭವನ್ನು ಹಾರೈಸುತ್ತೇನೆ.

ಡಾ. ಎಂ. ಎಸ್. ದುರ್ಗಾಪ್ರವೀಣ್

ಮುಖ್ಯಸ್ಥರು, ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ

ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ, ಆಂಧ್ರಪ್ರದೇಶ

ಜೂನ್ 2020
 
viii