Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/36

From Wikisource
This page has been validated.

KRAPF, HUBER, STAMM,METZ, BEIERBACH, BURKHARDT, KEUDEL, ಮುಂತಾದವರಲ್ಲದೆ ಕಿಟೆಲ್, ಮೋಗ್ಲಿಂಗ್, ಮೆನ್ನರ್, ಬ್ರಿಗೆಲ್, ಅಮ್ಮನ್ಸ್, ಗುಂಡರ್ಟ್ ಮುಂತಾದ ಮಿಶನರಿಗಳು ಮುದ್ರಣಾಲಯದ ಅಭಿವೃದ್ಧಿಗೆ ಶ್ರಮ ಪಟ್ಟಿರುವುದು, ಹೊರದೇಶದಿಂದ ಮುದ್ರಣ ಯಂತ್ರ, ಪೇಪರ್ ಮುಂತಾದ ಸಾಮಗ್ರಿಗಳನ್ನು ತರಿಸುತ್ತಿದ್ದುದು, ಬೇರೆ ಬೇರೆ ಪ್ರಕಾಶಕರುಗಳು ಮುದ್ರಣಕ್ಕಾಗಿ ಬರುತ್ತಿದ್ದುದು ಮುಂತಾದ ನಿದರ್ಶನಗಳಿವೆ. ಲೇಖನಗಳಿವೆ. ಬಾಸೆಲ್ ಮಿಶನ್ ವರದಿಗಳಲ್ಲಿ, ಪ್ರೆಸ್‌ನ ವರದಿ ಪುಸ್ತಕದಲ್ಲಿ ದಾಖಲೆಯಿದೆ.

ಅಲ್ಲದೆ ನೀರೇಶ್ವಾಲ್ಯ ಮತ್ತು 1965 ಸುಮಾರಿಗೆ ಪ್ರಸ್ತುತ ಹಂಪನಕಟ್ಟೆಯಲ್ಲಿರುವ ವಿಜಯಾ ಪೆನ್ ಮಾರ್ಟ್ ಇರುವ ಕಟ್ಟಡದಲ್ಲಿ ಇದ್ದ ಬಾಸೆಲ್ ಮಿಶನ್ ಬುಕ್ ಶಾಪ್ ಮುಚ್ಚಿ ಚಂದ್ರನಾ ಬ್ರದರ್ಸ್ ನವರಿಗೆ ಮಾರಲಾಗಿದೆ. ಮುದ್ರಣಕ್ಕೆಂದು ಬರುವ ಪ್ರಕಾಶಕರು ಇಲ್ಲಿಯೇ ಉಳುಕೊಳ್ಳುತ್ತಿದ್ದುದು, 150ಕ್ಕೂ ಮಿಕ್ಕಿ ಕೆಲಸಗಾರರಿದ್ದುದು, ಜಿಲ್ಲೆಯಾದ್ಯಂತ ಇರುವ ಪ್ರೆಸ್‌ಗಳವರು ಈ ಪ್ರೆಸ್‌ನ ಉಪಯೋಗ ಪಡೆದುಕೊಳ್ಳುತ್ತಿದ್ದುದು, ಇಲ್ಲಿ ಕೆಲಸ ಹಾಗೂ ಕಲಿತವರು ಸ್ವಂತ ಪ್ರೆಸ್ ಸ್ಥಾಪಿಸಿದ್ದು ಬಾಸೆಲ್ ಮಿಶನ್ ಪ್ರೆಸ್‌ನ ಹೆಗ್ಗಳಿಕೆ.

ಬಾಸೆಲ್ ಮಿಶನರಿಗಳ ಮುದ್ರಣ ಸೇವೆಯ ಮುಖಾಂತರ ಕನ್ನಡ ಮತ್ತು ತುಳು ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸೇವೆಗೆ ಸಂದೇಶ ವಿಶೇಷ ಪ್ರಶಸ್ತಿ 2003, ಕಿಟೆಲ್, ಮೋಗ್ಲಿಂಗ್ ಅವರ ಕನ್ನಡ ಸೇವೆ ಹಾಗೂ ಕನ್ನಡ ಅಭಿವೃದ್ಧಿಯಲ್ಲಿ ನಿರ್ವಹಿಸಿದ ಪಾತ್ರವನ್ನು ಪರಿಗಣಿಸಿ ಕೆ.ಟಿ.ಸಿ. ಮಂಗಳೂರು ಇವರಿಗೆ ಆಳ್ವಾಸ್ ನುಡಿಸಿರಿ ವಿರಾಸತ್ 2013ರಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ಪ್ರಶಸ್ತಿ, ವಾದಿರಾಜ ಕನಕದಾಸ, ಪುರಂದರದಾಸ ಸಾಹಿತ್ಯ ಸಂಗೀತೋತ್ಸವ 2008-2009 ಮಹಾತ್ಮಗಾಂಧಿ ಮೆಮೊರಿಯಲ್ ಕಾಲೇಜು ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಸರ ಪದ(1850) ಕೃತಿಯನ್ನು ಪ್ರಕಟಿಸುವ ಮೂಲಕ ಮನ್ನಣೆ ತಂದುಕೊಟ್ಟ ಬಾಸೆಲ್ ಮಿಶನ್ ತಿಯೊಲಾಜಿಕಲ್ ಸೆಮಿನರಿಯ ಮೊದಲ ಪ್ರಾಂಶುಪಾಲರಾದ ರೆವೆ. ಹೆರ್ಮನ್ ಮೋಗ್ಲಿಂಗ್‌ರವರ ಪರವಾಗಿ ಕೆ.ಟಿ.ಸಿಗೆ ಗೌರವ ಪತ್ರ ಸಂದಿದೆ. ಕರಾವಳಿ ಪ್ರಿಂಟ‌ ಎಸೋಸಿಯೇಷನ್ (ರಿ)ರವರು ಎಪ್ರಿಲ್ 2000ರಂದು ಏರ್ಪಡಿಸಿದ ಮುದ್ರಕರ ಪ್ರಥಮ ಮಹಾಸಮ್ಮೇಳನದಲ್ಲಿ ಕರಾವಳಿ ಜಿಲ್ಲೆಗಳ ಮುದ್ರಣ ಉದ್ಯಮದ ಗೌರವಾನ್ವಿತ ಹಿರಿಯ ಸಂಸ್ಥೆಗಳಲ್ಲೊಂದಾದ ಬಾಸೆಲ್ ಮಿಶನ್‌ ಪ್ರೆಸ್‌ಗೆ ಅಭಿನಂದನ ಪತ್ರ ನೀಡಿ ಗೌರವಿಸುವ ಮೂಲಕ ಮಿಶನರಿಗಳ ಕಾರ್ಯವನ್ನು ಗುರುತಿಸಿ ಗೌರವಿಸಿದೆ.


24
'ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...