Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/34

From Wikisource
This page has been validated.

ಪ್ರೆಸ್‌ನೊಳಗೆ ಬರಲು ಕಬ್ಬಿಣದ ಏಣಿಯ ವ್ಯವಸ್ಥೆಯಿದ್ದು ನೌಕರರ ಚಲನವಲನಗಳನ್ನು ವೀಕ್ಷಿಸಲು ಕೊಠಡಿಯೊಳಗೆ ಕಿಟಕಿಯೊಂದಿತ್ತು. ಈ ಸಂದರ್ಭದಲ್ಲಿ ಮೊದಲಿದ್ದ ಕೆಳಗಿನ ಬೋರ್ಡ್ ಬದಲಾಯಿಸಿ ಮಾಡಿನ ಮೇಲೆ ಕಬ್ಬಿಣದಿಂದ ತಯಾರಿಸಿದ ಬೋರ್ಡ್ ಹಾಕಲಾಗಿತ್ತು.

1960 ನಂತರ ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಇತರ ಮುದ್ರಣ ಸಂಸ್ಥೆಗಳು, ಹೊಸ ಹೊಸ ನಮೂನೆಯ ಮುದ್ರಣ ವ್ಯವಸ್ಥೆ ಮುಂತಾದ ಹಲವಾರು ಕಾರಣಗಳಿಂದ ಬಾಸೆಲ್ ಮಿಶನ್ ಪ್ರೆಸ್‌ನ ಬೆಳವಣಿಗೆ ಕುಂಠಿತವಾಗತೊಡಗಿತು. ಪ್ರೆಸ್‌ನ ದಾಖಲೆ ಪುಸ್ತಕದಲ್ಲಿ 1939ರಲ್ಲಿ 114, 1942ರಲ್ಲಿ 87, 1967ರಲ್ಲಿ 16 ನೌಕರರು ಇದ್ದರು ಎಂದು ನಮೂದಿಸಿರುವುದು ಪ್ರೆಸ್ ವರ್ಷ ಕಳೆದಂತೆ ಕುಂಟುತ್ತಾ ಬಂದಿರುವುದು ಭಾಸವಾಗುತ್ತದೆ. ಬಾಸೆಲ್ ಮಿಶನ್ ಸಂಸ್ಥೆಯು 1964ರಲ್ಲಿ ಪ್ರೆಸ್‌ನ ಕಟ್ಟಡದಲ್ಲಿಯೇ ಹೆಬಿಕ್ ತಾಂತ್ರಿಕ ತರಬೇತಿ ಶಾಲೆಯನ್ನು ತೆರೆದು ಜಿಲ್ಲೆಯಲ್ಲಿ ತಾಂತ್ರಿಕ ತರಬೇತಿ ಶಾಲೆಯನ್ನು ಪ್ರಾರಂಭಿಸಿತು. 1965ರಲ್ಲಿ ಹಂಪನಕಟ್ಟೆಯಲ್ಲಿರುವ ಬುಕ್ ಶಾಪ್ ಮುಚ್ಚಲಾಯಿತು. ತದನಂತರವೂ ಮಂದಗತಿಯಲ್ಲಿ ನಡೆಯುತ್ತಿದ್ದ ಮುದ್ರಣಾಲಯವನ್ನು 1970ರಲ್ಲಿ ಮುಚ್ಚಬೇಕಾಯಿತು. ಹಲವಾರು ಯಂತ್ರಗಳನ್ನು, ಅಚ್ಚುಮೊಳೆಗಳನ್ನು, ಹಲವು ಕಾರ್ಮಿಕರನ್ನು ಹೊಂದಿದ್ದ ಮುದ್ರಣಾಲಯ ಮುಚ್ಚಿದ್ದರಿಂದ ಜಿಲ್ಲೆಗೆ ಆದ ನಷ್ಟ ಅಷ್ಟಿಷ್ಟಲ್ಲ. 1847ರಲ್ಲಿ ಬಲ್ಮಠದಲ್ಲಿ ಸ್ಥಾಪನೆಗೊಂಡ ವೇದಮಠದ ಆಡಳಿತವು 1969ರಲ್ಲಿ ಕೆ.ಟಿ.ಸಿ.ಯನ್ನು ಕೇಂದ್ರವಾಗಿರಿಸಿಕೊಂಡು ಇತರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ಕ್ರೈಸ್ತ ವಿದ್ಯಾ ಸಂಸ್ಥೆ (ಕರ್ನಾಟಕ ಕ್ರಿಶ್ಚನ್ ಎಜುಕೇಶನಲ್ ಸೊಸೈಟಿ)ಯು ಸ್ವಾಯತ್ತೆ ಪಡೆದ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂತು.

1970ರಲ್ಲಿ ಕಾಮನ್‌ವೆಲ್ತ್ ಸಂಸ್ಥೆ ನಡೆಸುತ್ತಿದ್ದು ಮುಚ್ಚಲ್ಪಟ್ಟಿದ್ದ ನೇಯಿಗೆ ಕಾರ್ಖಾನೆಯನ್ನು ನಿವೇಶನ ಸಹಿತ ಕಾಸೆಸ್ ಪಡೆದುಕೊಂಡಿತು. ಈ ಸ್ಥಳದಲ್ಲಿ 1907ರಲ್ಲಿ ನಿರ್ಮಿಸಲ್ಪಟ್ಟ ಬಾಸೆಲ್ ಮಿಶನ್ ನೇಯಿಗೆ ಕಾರ್ಖಾನೆಯ ಕಟ್ಟಡವಿತ್ತು 1914ರಲ್ಲಿ ನಡೆದ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಬಾಸೆಲ್ ಮಿಶನ್ ಹಂಚಿನ ಕಾರ್ಖಾನೆ ಮತ್ತು ನೇಯಿಗೆ ಕಾರ್ಖಾನೆಯು ಕಾಮನ್‌ವೆಲ್ತ್ ಆಡಳಿತದಲ್ಲಿತ್ತು. ಕಾಮನ್‌ವೆಲ್ತ್ ಸಂಸ್ಥೆಯು ಈ ಕಟ್ಟಡದಲ್ಲಿ ನೇಯಿಗೆ ಕಾರ್ಖಾನೆಯನ್ನು ಮುಂದುವರಿಸಲು ಈ ಕಟ್ಟಡವನ್ನು ವಿಸ್ತರಿಸಿಯೂ ಕಟ್ಟಿದ್ದರು. ಮುಚ್ಚಿದ್ದ ಬಾಸೆಲ್ ಮಿಶನ್ ಪ್ರೆಸ್ ಮತ್ತು ಅದರ ಕೊಡುಗೆಯ ಪರಂಪರೆಯನ್ನು ಉಳಿಸಿಕೊಳ್ಳಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕಾಸೆಸ್ ಸಂಸ್ಥೆಯ


22
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...