Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/190

From Wikisource
This page has been proofread.

ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ಹೆಚ್ಚಿನವನು” ಎಂದು ಹೇಳುತ್ತಾನೆ. ಯೇಸುವಿನ ಬೋಧನೆ ಈ ರೀತಿಯದ್ದಾಗಿತ್ತು. ಮಾನವನ ಹೃದಯ ಮನಸ್ಸು ಹೇಗಿರಬೇಕೆಂದರೆ ಅದು ಮಕ್ಕಳ ಮನಸ್ಸಿನಂತೆ ನಿಷ್ಕಪಟವಾಗಿದ್ದು,ನಿರ್ಮಲವಾಗಿರಬೇಕು. ಯೇಸುವಿನ ಈ ಬೋಧನೆಯ ಸಾರಾಂಶದಂತೆ ಸಾಂತಾಕ್ಲಾಸ್‌ನಿಗೆ ಮಕ್ಕಳ ಮೃದು ಸ್ವಭಾವ ಹೇಗೆ ಮೆಚ್ಚಿಗೆಯಾಗುತ್ತಿತ್ತು. ಮಕ್ಕಳನ್ನು ಆ ಸಂತನು ಹೇಗೆ ಸಂತೈಸುತಿದ್ದ ಎನ್ನುವ ಕತೆಯೊಂದು ಪ್ರಚಲಿತದಲ್ಲಿದೆ.

ಅಂದು ಕ್ರಿಸ್ಮಸ್ ರಾತ್ರಿ, ಮಂಜು ಬೀಳುತ್ತಿತ್ತು. ಮೈ ಕೊರೆಯುವ ಚಳಿಯ ವಾತಾವಾರಣ. ನಿಕೋಲಸನು ಈ ದಿನ ಅಗತ್ಯವಿದ್ದ. ನಿಷ್ಕಲ್ಮಷ ವ್ಯಕ್ತಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ ಒಂದು ಉಪಾಯ ಮಾಡಿ ಬಡ ಮುದುಕನಂತೆ ವೇಷ ಧರಿಸಿಕೊಂಡು ಒಂದು ಭಾರವಾದ ಮೂಟೆಯನ್ನು ಹೊತ್ತುಕೊಂಡು ಜನನಿಬಿಡವಾದ ಮಾರ್ಗವಾಗಿ ಕುಂಟುತ್ತಾ ನಡೆಯಲಾರಂಭಿಸಿದ. ಜನರು ಕ್ರಿಸ್ಮಸ್ ಹಬ್ಬಕ್ಕಾಗಿ ಸಿದ್ಧತೆ ಮಾಡಲು ಬೇಕಾದ ಸಾಮಾಗ್ರಿಗಳನ್ನು ಕೊಳ್ಳುವ ತರಾತುರಿಯಲ್ಲಿದ್ದರು. ಆ ಮುದುಕನು ನಡೆಯುತ್ತಾ ಹೋಗುತ್ತಿರುವಾಗ ಒಬ್ಬನನ್ನು ತಡೆದು- “ಸಹೋದರನೇ ನನ್ನ ಹೊರೆಯನ್ನು ಹೊರಲು ಸ್ವಲ್ಪ ಸಹಾಯ ಮಾಡುವೆಯಾ? “ಎಂದ “ಕ್ಷಮಿಸಿ ನನಗೆ ತುರ್ತಾಗಿ ಕೆಲಸವಿದೆ” ಎಂದು ಆತ ಹೋಗಿಯೇ ಬಿಟ್ಟ. ಮುಂದಕ್ಕೆ ನಡೆಯುತ್ತಾ ಇರುವಾಗ ಒಬ್ಬ ಶ್ರೀಮಂತ ಮತ್ತು ಆತನೊಂದಿಗಿದ್ದ ಸೇವಕನನ್ನು ಕಂಡು ಮುದುಕನು ಆ ಶ್ರೀಮಂತನೊಂದಿಗೆ ದಯಾಳುವೇ ನನ್ನ ಭಾರವಾದ ಈ ಮೂಟೆಯನ್ನು ಹೊರಲು ತಮ್ಮ ಸೇವಕನಿಂದ ನನಗೆ ಸಹಾಯ ಮಾಡಿಸಬಹುದೇ” ಎಂದಾಗ ಆ ಶ್ರೀಮಂತನು “ಸೋಮಾರಿಯ ಹಾಗೆ ಮಾಡಬೇಡ ನಿನ್ನ ಹೊರೆಯನ್ನು ನೀನೆ ಹೊರಬೇಕು” ಎಂದು ಬಿರುಸಾಗಿ ಸೇವಕನೊಂದಿಗೆ ಮುಂದಕ್ಕೆ ನಡೆದ . ಮುದುಕ ಬಳಲುತ್ತಾ ಕುಂಟುತ್ತಾ ಮುಂದಕ್ಕೆ ಸಾಗುವಾಗ ಕೈಯಲ್ಲಿ ಕೋಳಿ ಹಿಡುಕೊಂಡು ಬರುವವನೊಬ್ಬನನ್ನು ಕಂಡು “ ಸ್ವಾಮಿ ನಾನು ತುಂಬಾ ಬಳಲಿದ್ದೇನೆ. ನನ್ನ ಈ ಮೂಟೆಯನ್ನು ಹೊರಲು ಸ್ವಲ್ಪ ಸಹಾಯ ಮಾಡುವೆಯಾ” ಎಂದಾಗ ಆ ಯೌವನಸ್ಥನು “ತಲೆ ನೆಟ್ಟಗಿಲ್ಲವೆ ನಿನಗೆ, ನಾನು ಹಿಡಿದುಕೊಂಡಿರುವ ಕೋಳಿಯನ್ನು ಕೆಳಗಿಟ್ಟು ನಿನಿಗೆ ಸಹಾಯ ಮಾಡಿದರೆ ನೀನು ಕೋಳಿಯನ್ನು ಹಿಡಿದುಕೊಂಡು ಓಡಿ ಹೋಗುತ್ತೀಯ, ಮತ್ತೆ ನಾನು ಕ್ರಿಸ್ಮಸ್ ಹಬ್ಬದೂಟಕ್ಕೆ ಹೇಗೆ ತಯಾರು ಮಾಡಲಿ” ಎಂದು ಮುಂದಕ್ಕೆ ಸಾಗಿದ. ಮುದುಕನು ಸಹಾಯಕ್ಕಾಗಿ ಕಾದನು, ಬೇಡಿದನು ಯಾರೂ ಸಿಕ್ಕಲಿಲ್ಲ. ಆ ಭಾರವಾದ

178 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...